Dear kind friends,
In the past, you have been generous enough to consider my request and it is only with your help that I have my own house today.
There is no doubt that the virtue gained through Devatarchana, Guru smarane, Annadaana, which have been going on for so long and continue to do so in that house, will reach you as well.
Presently, on the Panchami of Magha masa Shukla paksha, one year of the house warming ceremony will be completed. Therefore, with the intention of praying to God for the good of everyone who helped to build the house, Pavamana homa, Vayustuti Punascharana, Sri Raghavendra Stotra Astottara have been organised on 14/02/2025.
I humbly request you to kindly send me the Gotra and Nakshatra of you and your family members for the same.
Regards,
H.S. Shyamachar
+91-9886016076
hsshyamachar@gmail.com
ಉಪಕಾರ ಸ್ಮರಣೆ ಕೃತಜ್ಞತಾ ಸಮರ್ಪಣೆ
ಆತ್ಮೀಯ ಸಹೃದಯ ಸ್ನೇಹಿತರೇ,
ಈ ಹಿಂದೆ ನನ್ನ ಮನವಿಯನ್ನು ಮನ್ನಿಸಿ ತಾವುಗಳು ಔದಾರ್ಯದಿಂದ ಯಥೋಚಿತವಾಗಿ ಮಾಡಿದ ಸಹಾಯದಿಂದಲೇ
ನನಗೂ ಒಂದು ಸ್ವಂತ ಮನೆ ಎಂಬುದಾಗಿರುತ್ತದೆ. ಆ ಮನೆಯಲ್ಲಿ ಇಷ್ಟು ದಿನ ನಡೆದ ಹಾಗೂ ಮುಂದೆ ನಡೆಯುವ ಯಥಾಶಕ್ತಿ ದೇವತಾರ್ಚನೆ,ಗುರುಗಳ ಸ್ಮರಣೆ,ಅನ್ನದಾನಾದಿ ಮಹತ್ಕಾರ್ಯವನ್ನು ಮಾಡಿದಾಗ ಅದರಿಂದ ಬರುವ ಯತ್ಕಿಂಚಿತ್ ಪುಣ್ಯವು ತಮಗೂ ತಲುಪುವುದರಲ್ಲಿ ಸಂಶಯವಿಲ್ಲ.
ಪ್ರಸ್ತುತ ಇದೇ ಮಾಘ ಮಾಸದ ಶುಕ್ಲಪಕ್ಷದ ಪಂಚಮಿಗೆ ಗೃಹಪ್ರವೇಶವಾಗಿ ಒಂದು ವರ್ಷ ತುಂಬುತ್ತದೆ.ಆದ್ದರಿಂದ ಆ ಮನೆಯನ್ನು ಕಟ್ಟಲು ಸಹಾಯ ಮಾಡಿದ ತಮಗೆ ಹಾಗೂ ತಮ್ಮ ಕುಟುಂಬದವರ ಒಳಿತಿಗಾಗಿ ದೇವರಲ್ಲಿ ವಿಶೇಷವಾಗಿ ಪ್ರಾರ್ಥನೆ ಮಾಡುವ ಉದ್ದೇಶದಿಂದ ದಿನಾಂಕ 14/2/2025 ರ ಶುಕ್ರವಾರದಂದು ಪವಮಾನಹೋಮ, ವಾಯುಸ್ತುತಿ ಪುನಶ್ಚರಣ, ಶ್ರೀರಾಘವೇಂದ್ರ ಸ್ತೋತ್ರದ ಅಷ್ಟೋತ್ತರ ಕಾರ್ಯಕ್ರಮವನ್ನು
ಹಮ್ಮಿಕೊಂಡಿದ್ದೇನೆ.ತಾವು ದಯಮಾಡಿ ತಮ್ಮ, ತಮ್ಮ ಕುಟುಂಬದವರ ಗೋತ್ರ,ನಕ್ಷತ್ರಗಳನ್ನು ಕಳುಹಿಸಿಕೊಡಲು ಸವಿನಯ ಕೋರಿಕೆ.
No comments:
Post a Comment